
ಈ ಬಾರಿಯ ದಸರಾ ಉತ್ಸವದ ಸಂದರ್ಭ ತೆಗೆದ ಅಪರೂಪದ ಚಿತ್ರವಿದು.
ಆಗ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಸಚಿವೆ, ಕುಮಾರಿ ಶೋಭ ಕರಂದ್ಲಾಜೆಯವರದ್ದೇ ಕಾರುಬಾರು. ಮೈಸೂರಿನ ಮೂಲೆಮೂಲೆಯಲ್ಲೂ ಅವರ ಪೋಸ್ಟರುಗಳು ರಾರಾಜಿಸುತ್ತಿದ್ದುದು ಸುಳ್ಳಲ್ಲ.
ದಸರಾ ಉತ್ಸವದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಸಚಿವರು, ಅದೇ ಹೊತ್ತಿನಲ್ಲಿ ನಡೆದ ‘ಕಾವಾ ಮೇಳ’ದ ಉದ್ಘಾಟನೆಗೂ ಆಗಮಿಸಿದ್ದರು. ಉದ್ಘಾಟನೆಯ ಬಳಿಕ ಮೇಳವನ್ನೆಲ್ಲ ಒಂದು ಸುತ್ತು ಹಾಕುವ ವೇಳೆ ಅಲ್ಲೇ ನಿರ್ಮಿಸಲಾಗಿದ್ದ ಜೋಕಾಲಿ ಅವರ ಕಣ್ಣಿಗೆ ಬಿತ್ತು.
ಸ್ವತಃ ಜೋಕಾಲಿಯಲ್ಲಿ ಕೂತ ಶೋಭಕ್ಕ ಹಾಗೇ ಒಮ್ಮೆ ತೂಗಿದರು. ಮೊದಲ ಬಾರಿ ಶಾಸಕಿಯಾಗಿ, ಸಚಿವೆಯೂ ಆದ ಅವರಿಗೆ ಆದದ್ದೆಲ್ಲ ಕನಸೋ ನನಸೋ ಅಂತ ಅನಿಸಿರಬೇಕು. ಜೋಕಾಲಿಯಲ್ಲಿ ಕೂತ ಸಚಿವೆ ಅಲ್ಲಿಂದಲೇ ಫೋಸು ಕೊಟ್ಟರು. ನಮ್ಮ ಕ್ಯಾಮರಾ ಕಣ್ಣುಗಳಿಗೆ ಅಷ್ಟು ಸಾಕಿತ್ತು.
ಅಂತೂ, ಜೋಕಾಲಿ ಕೂಡ ಸಚಿವರಿಂದಲೇ ಉದ್ಘಾಟನೆ ಆಯ್ತು. ಚಿತ್ರದೊಳಗಿರುವ ಸಚಿವರ ಇನ್ನೊಂದು ಚಿತ್ರ ದಸರಾ ವೇಳೆ ಪೋಸ್ಟರುಗಳಲ್ಲಿ ಕಾಣಿಸಿಕೊಂಡದ್ದು.
ಇದು ಚಿತ್ರಕುಲುಮೆಯ ಎಕ್ಸ್ ಕ್ಲೂಸಿವ್ ಚಿತ್ರ!
February 24, 2009 at 4:01 pm |
ಚುರುಕಾಗಿ,ಚುಟುಕಾಗಿ, ಚೆನ್ನಾಗಿದೆ ನಿಮ್ಮ ಬ್ಲಾಗ್…