ಮೊದಲ ಪೇಂಟಿಂಗ್…

ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.
  
ಕನಸುಗಳ ಉಗ್ರಾಣ ದೊಡ್ಡದಿದೆ. ಅದರ ಮೇಲೆ ನಮಗೆ ಹಿಡಿತವಿಲ್ಲ. ಇಲ್ಲಿ ಕ್ಯಾಮರಾದ ಛಬುಕಿದೆ, ಬ್ರಶ್‌ಗಳ ಚಳಕವಿದೆ, ನಮಗನ್ನಿಸಿದ ಸಾಲುಗಳೂ ಅವುಗಳ ಜೊತೆಗಿವೆ. ಬರೆಯಿಡುವ ಕಾರ್ಟೂನ್‌ಗಳು, ಯರ್ರಾಬಿರ್ರಿ ಗ್ರಾಫಿಕ್ ಡಿಸೈನ್‌ಗಳು ಹೀಗೆ ಬಯಸಿದ್ದೆಲ್ಲವನ್ನೂ ‘ಚಿತ್ರಕುಲುಮೆ’ಗೆ ತುರುಕುವ ಮನಸ್ಸಿದೆ.

ಇಲ್ಲಿ ಹರಡಿದ ಎಲ್ಲವುಗಳೂ ನಮ್ಮವೇ ಕುಸುರಿಗಳಾದ್ದರಿಂದ ಇವುಗಳ ಮೇಲೆಲ್ಲಾ ನಮ್ಮ ಹಕ್ಕಿದೆ ಎನ್ನುವುದು ನಿಷ್ಠುರತೆಯ ಮಾತೇನಲ್ಲ. ನಿಮಗನ್ನಿಸಿದ ಸಾಲುಗಳನ್ನೂ ನೀವಿಲ್ಲಿ ಗೀಚಬಹುದು. ಹಾಗಂತ ಅವುಗಳ ಮೇಲೂ ನಾವು ಹಕ್ಕು ಸಾಧಿಸುತ್ತೇವೆ ಎಂದುಕೊಳ್ಳುವ ಅಗತ್ಯವಿಲ್ಲ!

ಉಳಿದಂತೆ ಹೇಳಬೇಕಾದ್ದೇನಿಲ್ಲ. ನೂರು ಮಾತು ಹೇಳದ್ದನ್ನು ಒಂದು ಚಿತ್ರ ಹೇಳುತ್ತದಂತೆ. ಇಲ್ಲಿ ಮಾತೂ ಇದೆ, ಚಿತ್ರವೂ… ನೋಡಿ ಹೇಳಿ.
              
ಇಂತಿ, ನಾವು

One Response to “ಮೊದಲ ಪೇಂಟಿಂಗ್…”

  1. ಹೇಮಶ್ರೀ Says:

    hi , good start .
    look into my photo blog : http://www.daisyridgediary.blogspot.com

    thank you.

Leave a Reply